Monday, January 9, 2017

ಈ ಬಾಳಗೀತೆಗೆ ಎಂದೂ ಶೃತಿಯಾದೆ ನೀನೂ Lyrics

ಹಾಡು: ಈ ಬಾಳಗೀತೆಗೆ ಎಂದೂ
ಚಲನಚಿತ್ರ: ಮಹಾತ್ಯಾಗ
ಸಂಗೀತ ನಿರ್ದೇಶಕರು: ರಾಜನ್-ನಾಗೇಂದ್ರ
ಕವಿ: ಆರ್.ಎನ್. ಜಯಗೋಪಾಲ್
ವರ್ಷ: 1974
ಹಾಡುಗಾರರು: ಎಸ್. ಜಾನಕಿ, ರಾಮಕೃಷ್ಣ

ಈ ಬಾಳಗೀತೆಗೆ ಎಂದೂ ಶೃತಿಯಾದೆ ನೀನೂ 
ಶೃತಿಯಲ್ಲಿ ನಾದವಾಗೀ ಬೆರೆತುಹೋದೆ ನಾನೂ ||ಪ||

ಸಪ್ತಸ್ವರ ರಾಗದಲ್ಲಿ ಅನುರಾಗ ತಂದೆ
ನನ್ನೆದೆಯ ತಾಳದಲ್ಲಿ ಆವೇಗ ತಂದೆ 
ಬದುಕೆಂಬ ಬಾನಿನಲ್ಲಿ ಹೊಂಗಿರಣ ತಂದೆ
ಈ ಪ್ರೇಮದ ಮನದೆ ನೆಲೆಯಾಗಿ ನಿಂದೆ
ಈ ನನ್ನ ಮನ ನಿಂದಾದ ಉಸಿರೊಂದಾದ ಆ ಕ್ಷಣದಂದೆ ||೧||

ಅಂಬಿಗನು ನೀನಾಗಿ ಈ ದೋಣಿ ತೇಲಲಿ
ಆನಂದ ಸಾಗರದ ತೀರವನು ಸೇರಲಿ
ಆಸರೆಯು ನೀನಾಗಿ ಈ ಬಳ್ಳಿ ಬಾಳಲಿ
ನೀನೆರೆದ ಪ್ರೀತಿಯಿಂದ ಭೂತಳೆದು ನಿಲ್ಲಲಿ
ಕೈ ಬಿಡದೆ ನಡೆ ನೀ ಮುಂದು ಜೊತೆ ನಾನೆಂದು ಜೀವನದಲ್ಲಿ

ನಾನು ನೀನು ಜೋಡಿ ಅನುದಿನ Lyrics

ಚಿತ್ರ: ನಂಬರ್ ಐದೂ ಯೆಕ್ಕ (೧೯೮೧/1981)
ಸಾಹಿತ್ಯ: ಶ್ಯಾಮಸುಂದರ್ ಕುಲಕರ್ಣಿ
ಸಂಗೀತ: ಎಂ.ರಂಗ ರಾವ್
ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ನಾನು ನೀನು ಜೋಡಿ ಅನುದಿನ
ಎಂದೆಂದೂ ಒಂದೇ ಮನ
ಉಲ್ಲಾಸ ತಂದಿದೆ ಮಿಲನ
ಅನುರಾಗ ಬಾಳಿನ ಕರೆ
ವಿರಾಗ ಬಾಳಿಗೆ ಹೊರೆ
ನಾನು ನೀನು ಜೋಡಿ ಅನುದಿನ
ಎಂದೆಂದೂ ಒಂದೇ ಮನ
ಉಲ್ಲಾಸ ತಂದಿದೆ ಮಿಲನ
ಅನುರಾಗ ಬಾಳಿನ ಕರೆ
ವಿರಾಗ ಬಾಳಿಗೆ ಹೊರೆ

ಹಿಮದ ಧವಳ ಮಣಿಯು ಹೊಳೆದಂತೆ ನಿನ್ನ ಅಂದ
ಸುಮದ ಚೆಲುವ ದಳವು ಮಕರಂದ ದುಂಬಿ ಇಂದ
ಕೋಗಿಲೆ ಈಗಲೇ, ಕೋಗಿಲೆ ಈಗಲೇ
ಸ್ನೇಹದಾಸೆ ಮೂಡಿ ಪ್ರೇಮಗಾನ ಹಾಡುತಿದೆ

ನಾನು ನೀನು ಜೋಡಿ ಅನುದಿನ
ಎಂದೆಂದೂ ಒಂದೇ ಮನ
ಉಲ್ಲಾಸ ತಂದಿದೆ ಮಿಲನ
ಅನುರಾಗ ಬಾಳಿನ ಕರೆ
ವಿರಾಗ ಬಾಳಿಗೆ ಹೊರೆ

ಜನುಮ ಜನುಮ ಜೊತೆಯ ಬೆರೆತಾಗ ಪ್ರೇಮ ರಾಗ
ಚೆಲುವ ಸಖಿಯು ಒಲುಮೆ ದೊರೆತಾಗ ಬಂತು ಯೋಗ
ನಿನ್ನಯ ಸ್ನೇಹದ, ನಿನ್ನಯ ಸ್ನೇಹದ
ದೋಣಿಯಲ್ಲೆ ನಲ್ಲ ಬಾಳ ಯಾನ ಸಾಗುತಿದೆ

ನಾನು ನೀನು ಜೋಡಿ ಅನುದಿನ
ಎಂದೆಂದೂ ಒಂದೇ ಮನ
ಉಲ್ಲಾಸ ತಂದಿದೆ ಮಿಲನ
ಅನುರಾಗ ಬಾಳಿನ ಕರೆ
ವಿರಾಗ ಬಾಳಿಗೆ ಹೊರೆ

ಮನಸು ಕನಸು ತೆನೆವ ವಯಸಲ್ಲೆ ನಿನ್ನ ಕಂಡೆ
ಹಳೆಯ ದಿನವ ಮರೆತು ಜಗವನ್ನೆ ಗೆಲ್ಲು ಎಂದೆ
ನಲ್ಲೆಯೇ ಬಲ್ಲೆಯಾ, ನಲ್ಲೆಯೇ ಬಲ್ಲೆಯಾ
ನಿನ್ನ ಪ್ರೀತಿಯಿಂದ ಇಲ್ಲೆ ಸ್ವರ್ಗ ಕಾಣುತಿದೆ

ನಾನು ನೀನು ಜೋಡಿ ಅನುದಿನ
ಎಂದೆಂದೂ ಒಂದೇ ಮನ
ಉಲ್ಲಾಸ ತಂದಿದೆ ಮಿಲನ
ಅನುರಾಗ ಬಾಳಿನ ಕರೆ
ವಿರಾಗ ಬಾಳಿಗೆ ಹೊರೆ

ಪ್ರೇಮಲೋಕದ ಪಾರಿಜಾತವೆ Lyrics

Movie: ಜಾಣ
ಸಾಹಿತ್ಯ ,ಸಂಗೀತ : ಹಂಸಲೇಖ

ಪ್ರೇಮಲೋಕದ ಪಾರಿಜಾತವೆ ಯಾಕೆ ನೀನು ಎದೆಯ ತುಂಬಿದೆ
ನೀನು ಒಳಗಿರಲು ಮಲಗೊ ಮಾತಿಲ್ಲ ನೀನು ಒಳಗಿರಲು ಉಸಿರೆ ಬೇಕಿಲ್ಲ
ನೀನು ಕನ್ನಡದ ಚಂದನದ ಕಂಪು ಕಸ್ತೂರಿ

ಚೆಲುವಿನ ಬಲೆಯಲಿ ಒಲವಿನ ಮೀನು ನಾ
ಸೆರಗಿನ ಗಿರಿಯಲಿ ವಿಲವಿಲ ಹಾಡು ನಾ
ಧರೆಗೆ ಇಳಿದ ಅಪ್ಸರೆ ನಗುವೆ ನಿನಗೆ ವರವೆ
ಸರಳ ವಿರಳ ಸುಂದರಿ ನೀನೆ ಸ್ವರ್ಗ ಎನುವೆ

ಕನ್ನಡ ಕವಿಗಳ ಕವನದ ಕವಿಗಳ
ಜೇನಿನ ಪದಗಳ ಹೂಮಳೆ ಸುರಿಸುವೆ
ಕಮಲ ವಿಮಲ ಮಲ್ಲಿಗೆ ಕಣ್ಣು ಹೃದಯ ಮನಸು
ರಾತ್ರಿ ರಾಣಿ ನೈದಿಲೆ ನಿನ್ನ ಮೈಯೆ ಸೊಗಸು

ಪ್ರೇಮಲೋಕದ ಪಾರಿಜಾತವೆ ಯಾಕೆ ನೀನು ಎದೆಯ ತುಂಬಿದೆ
ನೀನು ಒಳಗಿರಲು ಮಲಗೊ ಮಾತಿಲ್ಲ ನೀನು ಒಳಗಿರಲು ಉಸಿರೆ ಬೇಕಿಲ್ಲ

Thursday, January 5, 2017

ನಾನು ನೀನು ಒಂದಾದ ಮೇಲೆ Lyrics

ಚಿತ್ರ: ನಾ ನಿನ್ನ ಬಿಡಲಾರೆ (೧೯೭೯/1979)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು: ಎಸ್.ಪಿ.ಬಿ, ಎಸ್.ಜಾನಕಿ

ನಾನು ನೀನು ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ
ನಾನು ನೀನು ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ
ಮುತ್ತಲ್ಲೆ ನಿನ್ನ ಸಿಂಗಾರ ಮಾಡಿ
ಕಣ್ತುಂಬ ನಾ ನೋಡುವೇ
ನಾನು ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೆ ನೋಡುವೆ
ಕಣ್ಣಲ್ಲು ನೀನೆ ಮನದಲ್ಲು ನೀನೆ
ಎಲ್ಲೆಲ್ಲೂ ನೀ ಕಾಣುವೇ
ನಾನು ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೆ ನೋಡುವೆ

ನನಗಾಗಿ ಹೆಣ್ಣಾಗಿ ಬಂದೆ
ನನ್ನಲ್ಲಿ ನಿನ್ನಾಸೆ ತಂದೆ
ಹಗಲಿಲ್ಲ ಇರುಳಿಲ್ಲ ನಿನ್ನಲ್ಲೆ ಮನವೆಲ್ಲ
ನೆನಪಲ್ಲೆ ನಾ ಸೋತು ಹೋದೆ
ಸಂಗಾತಿ ನೀನಾಗಿ ಬಂದೆ
ಸಂತೋಷ ಬಾಳಲ್ಲಿ ತಂದೆ
ಹಗಲಲ್ಲಿ ಇರುಳಲ್ಲಿ ಮನವೆಲ್ಲ ನಿನ್ನಲ್ಲಿ
ನೆನಪಿಂದ ನಾ ನೊಂದು ಹೋದೆ
ಇನ್ನೆಂದು ಈ ಚಿಂತೆ ನಿನಗಿಲ್ಲವೆ

ನಾನು ನೀನು ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ
ಮುತ್ತಲ್ಲೆ ನಿನ್ನ ಸಿಂಗಾರ ಮಾಡಿ
ಕಣ್ತುಂಬ ನಾ ನೋಡುವೇ
ನಾನು ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೆ ನೋಡುವೆ

ಲತೆಯಲ್ಲಿ ಹೂವಾಗಿ ನಾನು
ಮರಿದುಂಬಿ ಅಂದಾಗಿ ನೀನು
ಹೂವಲ್ಲಿ ಹೊರಳಾಡಿ ಜೇನಾಟ ನಾವಾಡಿ
ಆನಂದ ಹೊಂದೋಣವೇನು
ಬಾನಾಡಿ ನಾವಾಗಿ ಹಾರಿ
ಬಾನಲ್ಲಿ ಒಂದಾಗಿ ಸೇರಿ
ಹೊಸ ಆಟ ಆಡೋಣ
ಹೊಸ ನೋಟ ನೋಡೋಣ
ಮುಗಿಲಿಂದ ಜಾರೋಣವೇನು
ಎಂದೆಂದು ನೆರಳಾಗಿ ನಾ ಬಾಳುವೆ

ನಾನು ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೆ ನೋಡುವೆ
ಕಣ್ಣಲ್ಲು ನೀನೆ ಮನದಲ್ಲು ನೀನೆ
ಎಲ್ಲೆಲ್ಲೂ ನೀ ಕಾಣುವೇ
ನಾನು ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೆ ನೋಡುವೆ
ಹೀಗೇಕೆ ನನ್ನನ್ನೆ ನೋಡುವೆ

Wednesday, January 4, 2017

ಹೇ... ನವಿಲೇ... ಹೆಣ್ಣವಿಲೇ

ಹೇ... ನವಿಲೇ... ಹೆಣ್ಣವಿಲೇ...
ಹೇ... ನವಿಲೇ..  ನವಿಲೇ..
ಹೆಣ್ಣವಿಲೇ..  ನವಿಲೇ..
ಬಾ ನವಿಲೇ.. ನವಿಲೇ...
ಬಾ ನವಿಲೇ..  ನವಿಲೇ...
ಆ ಸೌಂದರ್ಯ ಲೋಕದಿಂದ ಜಾರಿದೆ...
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ...
ಆ ಸೌಂದರ್ಯ ಲೋಕದಿಂದ ಜಾರಿದೆ...
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ...
ಹೇ.. ನವಿಲೇ..  ಹೆಣ್ಣವಿಲೇ...
ಹೇ.. ನವಿಲೇ...  ನವಿಲೇ...
ಹೆಣ್ಣವಿಲೇ... ನವಿಲೇ...
ಬಾ ನವಿಲೇ.. ನವಿಲೇ...
ಬಾ ನವಿಲೇ..  ನವಿಲೇ...

ಸೌಂದರ್ಯ ರೇಖೆಯ ನೂರಾರು ಶಾಖೆಯ..
ಸೌಂದರ್ಯ ರೇಖೆಯ ನೂರಾರು ಶಾಖೆಯ...
ಆರಂಭ ಹೇಳು ಎಲ್ಲಿದೇ.. ಎಲ್ಲಿದೆ..?
ಈ ಅಂದ ಸಂಪೂರ್ಣ ಕಲೆಯಾಗಿದೆ...
ಮಾತಾಡೊ ಬೇಲೂರ ಶಿಲೆಯಾಗಿದೆ...
ಹೆಣ್ಣಾಗಿದೆ.. ಹೆಣ್ಣವಿಲಾಗಿದೆ...

ಹೇ.. ನವಿಲೇ.. ಹೆಣ್ಣವಿಲೇ...
ಹೇ.. ನವಿಲೇ.. ನವಿಲೇ...
ಹೆಣ್ಣವಿಲೇ... ನವಿಲೇ...
ಬಾ ನವಿಲೇ ನವಿಲೇ..
ಬಾರೆ ನವಿಲೇ ನವಿಲೇ...
ಆ ಸೌಂದರ್ಯ ಲೋಕದಿಂದ ಜಾರಿದೆ...
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ..

ನೀನಿಲ್ಲಿ ಬಂದಿರೆ ಹೂ ನಗುವ ತಂದಿರೆ...
ನೀನಿಲ್ಲಿ ಬಂದಿರೆ ಹೂ ನಗುವ ತಂದಿರೆ..
ನೋಡಲ್ಲಿ ತಾರೆ ನಾಚಿದೇ... ಮಿಂಚದೆ...
ಆ ತಾರೆ ಏನಾದರೇನಾಯಿತು...
ನೀ ದೂರ ಹೋಗದೆ ಇದ್ದರಾಯಿತು...
ನೀನಾಯಿತು ಇನ್ನು ನಾನಾಯಿತು...

ಹೇ... ನವಿಲೇ.. ಹೆಣ್ಣವಿಲೇ...
ಹೇ.. ನವಿಲೇ.. ನವಿಲೇ...
ಹೆಣ್ಣವಿಲೇ.. ನವಿಲೇ...
ಬಾ ನವಿಲೇ.. ನವಿಲೇ...
ಬಾ ಬಾರೆ ನವಿಲೇ.. ನವಿಲೇ...
ಆ ಸೌಂದರ್ಯ ಲೋಕದಿಂದ ಜಾರಿದೆ...
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ...

Sunday, January 1, 2017

ಕನ್ನಡದ ಕುಲದೇವಿ ಕಾಪಾಡು ಬಾ lyrics

ಚಿತ್ರ: ಪೋಸ್ಟ್ ಮಾಸ್ಟರ್ (೧೯೬೪)
ಸಂಗೀತ: ವಿಜಯ ಭಾಸ್ಕರ್
ಹಾಡಿರುವವರು: ಪಿ.ಬಿ. ಶ್ರೀನಿವಾಸ್

ಕನ್ನಡದ ಕುಲದೇವಿ ಕಾಪಾಡು ಬಾ ತಾಯೇ
ಮುನ್ನಡೆಯ ಕನ್ನಡದ ದಾರಿ ದೀವಿಗೆ ನೀನೆ

ಪ್ರೇಮ ಕರುಣೆಯ ಕಲಿಸಿ ಶಾಂತಿ ಸಹನೆಯ ಬೆಳೆಸಿ
ಕಾಮಕ್ರೋಧವನಳಿಸಿ ಕಾಪಾಡು ತಾಯೇ
ಒಂದಾದ ದೇಶದಲಿ ಹೊಂದಿ ಬಾಳದ ಸುತರ
ಹೊಸಬೆಸುಗೆಯಲಿ ಬಿಗಿದು ಒಂದು ಗೂಡಿಸೆ ತಾಯೇ

ಯಾವೆಣ್ಣೆಯಾದರೂ ಬೆಳಗುವುದೇ ಗುರಿಯೆಂಬ
ತತ್ತ್ವವನು ನೀನೆತ್ತಿ ತೋರುಬಾ ತಾಯೇ
ಎದೆಯಾಂತರಾಳದಲಿ ಪುಟಿವ ಕಾರಂಜಿಯಲಿ
ಒಂದಾಗಿ ಕೂಗಲಿ ಕನ್ನಡಾ ಕನ್ನಡಾ...

ಮಲಯ ಮಾರುತ (1986) - ಎಲ್ಲೆಲ್ಲು ಸಂಗೀತವೇ Lyrics

ಮಲಯ ಮಾರುತ (1986) - ಎಲ್ಲೆಲ್ಲು ಸಂಗೀತವೇ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ವಿಜಯಭಾಸ್ಕರ್
ಗಾಯನ: ಕೆ.ಜೆ.ಯೇಸುದಾಸ್
ಎಲ್ಲೆಲ್ಲು ಸಂಗೀತವೇ
ಎಲ್ಲೆಲ್ಲು ಸೌಂದರ್ಯವೇ
ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು
ಎಲ್ಲೆಲ್ಲು ಸಂಗೀತ

ನಿಸ ನಿಸರಿಗ ಸರಿಗ ಸರಿಗ ಮಪದಮ
ನಿಸ ದನಿದನಿ ಸನಿ, ನಿಸರಿಗ ಮಗಸನಿ
ನಿದಾದ ದಮಾಮ ಮಗಾಗ ಗಸಾಸ

ಎಲ್ಲೆಲ್ಲು ಸಂಗೀತವೇ||
ಸಂಧ್ಯೆಯು ಬಂದಾಗ ಆಗಸ ಅಂದಾ
ಆ ಉಷೆ ನಗುವಾಗ ಲೋಕವೆ ಚಂದಾ..

ಸರಿಗ ಸರಿಗ ಮಮ ಗಾಗ ಮಾಮ ಪದ
ಮಪದ ದ ಮಪದನಿ ಮಾಮ ಪಾಪ ದದ
ಪದನಿನಿ ಪದನಿ ಸಾಸ ನೀನಿ ಸನಿ
ಸರಿಗ ಸರಿಗ ಸನಿ ದಾದ ಮಾಮ ಗಗಸ

ಬಳುಕುವ ಲತೆಯಿಂದ ಅರಳಿದ ಹೂವಿಂದ
ಆ ಸುಮ ಚೆಲ್ಲುವ ಪರಿಮಳದಿಂದ||
ಎಲ್ಲೆಲ್ಲು ಸೌಂದರ್ಯವೇ..||
ಹರಿಯುವ ನೀರಲಿ ಕಲ ಕಲರವವೂ
ಕೋಗಿಲೆ ಕೊರಳಿನ ಸುಮಧುರ ಸ್ವರವೂ
ಭ್ರಮರದ ಝೇಂಕಾರ ಮುನಿಗಳ ಓಂಕಾರ
ಈ ಜಗ ತುಂಬಿದೆ ಮಾಧುರ್ಯದಿಂದಾ||
ಎಲ್ಲೆಲ್ಲು ಸಂಗೀತವೇ
ಸಂಗೀತ ಎಂದಿಗು ಸುರಗಂಗೆಯಂತೇ
ಸಂಗೀತ ಎಂದಿಗು ರವಿಕಾಂತಿಯಂತೇ|