Tuesday, January 17, 2017

ಕರ್ನಾಟಕದ ಇತಿಹಾಸದಲಿ Lyrics

ಕೃಷ್ಣ ರುಕ್ಮಿಣಿ (1988) -

ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್.ಪಿ.ಬಿ

ಕರ್ನಾಟಕದ ಇತಿಹಾಸದಲಿ
ಬಂಗಾರದ ಯುಗದ ಕಥೆಯನ್ನು
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಕರ್ನಾಟಕದ ಇತಿಹಾಸದಲಿ

ಜ್ಞಾನದ ಜ್ಯೋತಿಯು ವಿದ್ಯಾರಣ್ಯರು
ಆನುಗ್ರಹಗೈದ ಭೂಮಿ ಇದು
ಜ್ಞಾನದ ಜ್ಯೋತಿಯು ವಿದ್ಯಾರಣ್ಯರು
ಆನುಗ್ರಹಗೈದ ಭೂಮಿ ಇದು

ಹಕ್ಕ ಬುಕ್ಕರು ಆಳಿದರಿಲ್ಲಿ
ಹರುಷದ ಮಳೆಯನ್ನು ಎಲ್ಲು ಚೆಲ್ಲಿ
ವಿಜಯದ ಕಹಳೆಯ ಊದಿದರು
ವಿಜಯನಗರ ಸ್ಥಾಪನೆ ಮಾಡಿದರು

ಕರ್ನಾಟಕದ ....

ಗಂಡರ ಗಂಡ ಧೀರ ಪ್ರಚಂಡ
ಕೃಷ್ಣದೇವರಾಯ ಆಳಿದ ವೈಭವದೆ
ಗಂಡರ ಗಂಡ ಧೀರ ಪ್ರಚಂಡ
ಕೃಷ್ಣದೇವರಾಯ ಆಳಿದ ವೈಭವದೆ

ಕಲಿಗಳ ನಾಡು ಕಲಿಗಳ ಬೀಡು
ಕಲಿಗಳ ನಾಡು ಕವಿಗಳ ಬೀಡು
ಎನಿಸಿತು ಹಂಪೆಯು ಆ ದಿನದೆ

ಕನ್ನಡ ಬಾವುಟ ಹಾರಿಸಿದ
ಮಧುರೆವರೆಗು ರಾಜ್ಯವ ಅರಳಿಸಿದ
ಕರ್ನಾಟಕದ ಇತಿಹಾಸದಲ್ಲಿ

ಸಂಗೀತ ನಾಟ್ಯಗಳಾ ಸಂಗಮವಿಲ್ಲೆ
ಶಿಲ್ಪಾ ಕಲೆಗಳ ತಾಣವಿದೆ
ಸಂಗೀತ ನಾಟ್ಯಗಳಾ ಸಂಗಮವಿಲ್ಲೆ
ಶಿಲ್ಪಾ ಕಲೆಗಳ ತಾಣವಿದೆ

ಭುವನೇಶ್ವರಿಯ ತವರೂರಿದೆ
ಯತಿಗಳ ದಾಸರ ನೆಲೆ ನಾಡಿಲ್ಲೆ
ಪಾವನ ಮಣ್ಣಿದು ಹಂಪೆಯದು
ಯುಗ ಯುಗ ಅಳಿಯದ ಕೀರ್ತಿ ಇದು

ಕನ್ನಡ ಭೂಮಿ ಕನ್ನಡ ನುಡಿಯು
ಕನ್ನಡ ಕೀರ್ತಿ ಎಂದೆಂದು ಬಾಳಲಿ

ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ

ಮಾಣಿಕ್ಯ ವೀಣಾ ಮುಫಲಾಲಯಂತೀಂ Lyrics

ಕವಿರತ್ನ ಕಾಳಿದಾಸ (1983) -
ಸಾಹಿತ್ಯ: ಕಾಳಿದಾಸ
ಸಂಗೀತ: ಎಂ. ರಂಗರಾವ್
ಗಾಯನ: ಡಾ| ರಾಜ್‍ಕುಮಾರ್

ಮಾಣಿಕ್ಯ ವೀಣಾ ಮುಫಲಾಲಯಂತೀಂ
ಮದಾಲಸಾಂ ಮಂಜುಲ ವಾಗ್ವಿಲಾಸಾಂ
ಆಆ......
ಮಾಣಿಕ್ಯ ವೀಣಾ ಮುಫಲಾಲಯಂತೀಂ
ಮದಾಲಸಾಂ ಮಂಜುಲ ವಾಗ್ವಿಲಾಸಾಂ
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ......
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ
ಮಾತಂಗಕನ್ಯಾಂ ಮನಸಾಸ್ಮರಾಮೀ....ಈ..
ಮನಸಾಸ್ಮರಾಮೀ

ಚತುರ್ಭುಜೇ ಚಂದ್ರಕಳಾವತಂಸೇ
ಕುಚೋನ್ನತೇ ಕುಂಕುಮರಾಗಶೋಣೇ....
ಚತುರ್ಭುಜೇ ಚಂದ್ರಕಳಾವತಂಸೇ
ಕುಚೋನ್ನತೇ ಕುಂಕುಮರಾಗಶೋಣೇ....
ಆ......
ಪುಂಡ್ರೇಕ್ಷುಪಾಶಾಂಕುಶ ಪುಷ್ಪಬಾಣಹಸ್ತೇ
ನಮಸ್ತೇ.. ಜಗದೇಕಮಾತಹಾ..ಆ..

ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
ಆ.....
ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
ಕುರ್ಯಾತ್ಕಟಾಕ್ಷಂ ಕಲ್ಯಾಣೀ.. ಕದಂಬ ವನವಾಸಿನೀ...
ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
ಕುರ್ಯಾತ್ಕಟಾಕ್ಷಂ ಕಲ್ಯಾಣೀ.. ಕದಂಬ ವನವಾಸಿನೀ...

ಜಯ ಮಾತಂಗತನಯೇ, ಜಯ ನೀಲೋತ್ಪಲದ್ಯುತೇ
ಜಯ ಸಂಗೀತರಸಿಕೇ, ಜಯ ಲೀಲಾಶುಕಪ್ರಿಯೇ...

ಸುಧಾಸಮುದ್ರಾಂತ ಹೃದ್ಯನ್ಮಣಿದ್ವೀಪ ಸಮ್ರೂಢ ಬಿಲ್ವಾಟವೀ ಮಧ್ಯ
ಕಲ್ಪದ್ರುಮಾಕಲ್ಪ ಕಾದಂಬ ಕಾಂತಾರವಾಸಪ್ರಿಯೇ...
ಕೃತ್ತಿವಾಸಪ್ರಿಯೇ.. ಸರ್ವಲೋಕಪ್ರಿಯೇ
ಪಲ್ಲಕೀವಾದನ ಪ್ರಕ್ರಿಯಾಲೋಲತಾಲೀದಲಾಬದ್ದ
ತಾಟಂಕ ಭೂಷಾವಿಶೇಷಾನ್ಮಿತೇ ಸಿದ್ದ ಸಮ್ಮಾನಿತೇ...

ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ
ವಾಯ್ವಗ್ನಿ ಕೋಟೀರ ಮಾಣಿಕ್ಯ
ಸಂಕೃಷ್ಟ ಬಾಲಾ ತಪೋತ್ತಾಮ
ಲಾಕ್ಷಾರ ಸಾರುಣ್ಯ
ಲಕ್ಷ್ಮೀಗೃಹೀತ್ತಾಂಗಿ ಪದ್ಮದ್ವಯೇ ಅದ್ವಯೇ..
ಪುರುಚಿನನವರತ್ನ ಪೀಠಸ್ತಿತೆ, ಸುಸ್ತಿತೇ
ಶಂಖ ಪದ್ಮದ್ವಯೋಪಾಶ್ರಿತೇ, ಆಶ್ರಿತೇ
ದೇವಿ ದುರ್ಗಾ ವಟುಕ್ಷೇತ್ರ ಪಾಲೈರ್ಯುತೆ
ಮತ್ತ ಮಾತಂಗ ಕನ್ಯಾ ಸಮೂಹಾನ್ವಿತೇ...

ಸರ್ವಯಂತ್ರಾತ್ಮಿಕೆ
ಸರ್ವಮಂತ್ರಾತ್ಮಿಕೆ
ಸರ್ವತಂತ್ರಾತ್ಮಿಕೆ
ಸರ್ವಮುದ್ರಾತ್ಮಿಕೆ
ಸರ್ವಶಕ್ತ್ಯಾತ್ಮಿಕೆ
ಸರ್ವವರ್ಣಾತ್ಮಿಕೆ
ಸರ್ವರೂಪೇ ಜಗನ್ಮಾತೃಕೇ.. ಹೇ ಜಗನ್ಮಾತೃಕೇ
ಪಾಹಿ ಮಾಂ ಪಾಹಿ ಮಾಂ ಪಾಹಿಮಾಂ ಪಾಹೀ

ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ Lyrics

**************************
ಸಾಹಿತ್ಯ / ಸಂಗೀತ: ಹಂಸಲೇಖ
ಗಾಯಕರು: ಕೆ. ಜೆ. ಯೇಸುದಾಸ್, ಎಸ್. ಜಾನಕಿ

ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ಭೂಮಿಯಲ್ಲಿ ಹಾಡಿ ತಿಳಿಸೋಣ
ಪ್ರೀತಿ ಹಂಚೋಣ
ಆನಂದ ಪಡೆಯೋಣ
ಬನ್ನಿ ಪ್ರೇಮದ ಹಸ್ತ್ರ ಹೇಳೋಣ

ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ ||೨||

ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ

ಗಾಳಿ, ನೀರು , ಹೂವು, ಹಣ್ಣು, ಇರುವುದು ಏತಕ್ಕೆ?
ಪ್ರೀತಿ ಇಂದ ತಾನೆ? ಪ್ರೇಮದಿಂದ ತಾನೆ?
ಸೂರ್ಯ ಚಂದ್ರ ರಾತ್ರಿ ಹಗಲು ಬರುವುದು ಏತಕ್ಕೆ?
ಪ್ರೀತಿ ಇಂದ ತಾನೆ? ಪ್ರೇಮದಿಂದ ತಾನೆ?

ಬರುವುದು ಹೇಗೆ? ಇರುವುದು ಹೇಗೆ?
ತಿಳಿದಿದೆ ನಮಗೆ, ಆದರೆ ಕೊನೆಗೆ
ಹೋಗುವ ಘಳಿಗೆ ತಿಳಿಯದು ನಮಗೆ
ಒಗಟಿದು ಎಲ್ಲರಿಗೆ

ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ

ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ

ರಾಗ ತಾಳ, ಹಾವ ಭಾವ ಸೇರದೆ ಹೋದರೇ
ಗಾನ ನಾಟ್ಯವಿಲ್ಲ, ಪ್ರೇಮ ರಾಗವಿಲ್ಲ

ಜೀವ ಜೀವ ಪ್ರೀತಿಯಿಂದ ಕೂಡದೆ ಹೋದರೆ
ಜೀವ ರಾಗವಿಲ್ಲ, ಶೂನ್ಯಲೋಕವೆಲ್ಲ

ಬದುಕಿನ ಜೊತೆಗೆ ಪ್ರೆಮದ ಬೆಸುಗೆ
ಇರುವುದು ಹೀಗೆ ಒಲವಿನ ತೆರೆಗೆ
ಪ್ರೀತಿಯ ಸವಿಗೆ ತೋರುವ ನಮಗೆ
ಪ್ರೇಮವು ವರತಾನೆ?

ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ

|| ಪ್ರೇಮಲೋಕದಿಂದ ||

ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ ||೨||

ಜೊತೆಯಾಗಿ ಹಿತವಾಗಿ, ಸೇರಿ ನಡೆವ, ಸೇರಿ ನುಡಿವಾ Lyrics

********************
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ಎಸ್. ಜಾನಕಿ ಮತ್ತು ಎಸ್.ಪಿ. ಬಾಲಸುಬ್ರಮಣ್ಯಂ

[ಗಂಡು]
ಜೊತೆಯಾಗಿ ಹಿತವಾಗಿ, ಸೇರಿ ನಡೆವಾ, ಸೇರಿ ನುಡಿವಾ ||೨||
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ....

[ಹೆಣ್ಣು]
ಜೊತೆಯಾಗಿ ಹಿತವಾಗಿ, ಸೇರಿ ನಡೆವಾ, ಸೇರಿ ನುಡಿವಾ ||೨||
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ....

[ಗಂಡು]
ಆ ಬಾನ ನೆರಳಲ್ಲಿ, ಆ ಸೂರ್ಯನೆದುರಲ್ಲಿ
ಒಲವಿಂದ ನಾವೀಗ, ಈ ಗಂಗೆ ದಡದಲ್ಲಿ
ಒಂದಾಗಿ ಸವಿಯಾದ ಮಾತೊಂದ ನುಡಿವ
[ಹೆಣ್ಣು]
ಈ ಸಂಜೆ ರಂಗಲ್ಲಿ, ಈ ತಂಪು ಗಾಳೀಲಿ
ಜೊತೆಯಾಗಿ ನಾವೀಗ, ಶಂಕರನ ಎದುರಲ್ಲಿ
ಇಂಪಾಗಿ ಹಿತವಾದ ಮಾತೊಂದ ನುಡಿವಾ

[ಗಂಡು]ನೀನೆ ನನ್ನ ಪ್ರಾಣ, [ಹೆಣ್ಣು] ನಮ್ಮ ಪ್ರಣಯ ಮಧುರ ಗಾನ ||೨||

[ಹೆಣ್ಣು]ಜೊತೆಯಾಗಿ
[ಗಂಡು] ಹಿತವಾಗಿ
[ಹೆಣ್ಣು]ಸೇರಿ ನಡೆವ
[ಗಂಡು] ಸೇರಿ ನುಡಿವಾ

[ಹೆಣ್ಣು]
ಕನಸಲ್ಲಿ ಕಂಡಾಸೆ, ಮನಸಲ್ಲಿ ಇರುವಾಸೆ
ಎಲ್ಲವೂ ಒಂದೇನೇ, ನಿನ್ನನ್ನು ಪಡೆವಾಸೆ
ಇನ್ನೇನು ಬೇಕಿಲ್ಲ, ನನ್ನಾಣೆ ನಲ್ಲ
[ಗಂಡು]
ಹಗಲಲ್ಲಿ ಕಂಡಾಸೆ, ಇರುಳಲ್ಲಿ ಬಂದಾಸೆ
ಎಲ್ಲಾವೂ ಒಂದೇನೆ, ನಿನ್ನೊಡನೆ ಇರುವಾಸೆ
ಬೇರೇನು ನಾ ಕೇಳೆ, ನಿನ್ನಾಣೆ ನಲ್ಲೆ

[ಗಂಡು] ಎಂದೂ ಹೀಗೆ ಇರುವ, [ಹೆಣ್ಣು] ನಾವೆಂದೂ ಹೀಗೆ ನಲಿವ ||೨||
[ಗಂಡು, ಹೆಣ್ಣು]ನಿನ್ನ ಬಿಡಲಾರೆ ನಾನೆಂದಿಗೂ

ಲಲ ಲಾ ಲಾ

[ಹೆಣ್ಣು]
ಜೊತೆಯಾಗಿ ಹಿತವಾಗಿ, ಸೇರಿ ನಡೆವ, ಸೇರಿ ನುಡಿವಾ ||೨||
[ಗಂಡು] ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
[ಹೆಣ್ಣು] ನನ್ನ ಉಸಿರಲ್ಲಿ ನೀ ಉಸಿರಾಗಿರು
[ಗಂಡು, ಹೆಣ್ಣು] ನಿನ್ನ ಬಿಡಲಾರೆ ನಾನೆಂದಿಗೂ....

************************

ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ Lyrics

ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ರಾಜ್ ಕೋಟಿ
ಗಾಯನ: ಎಸ್. ಪಿ. ಬಾಲಸುಭ್ರಮಣ್ಯಂ

ಮುದ್ದಿನ ಹುಡುಗಿ ಚೆಂದ, ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಮುದ್ದಿನ ಹುಡುಗಿ ಚೆಂದ, ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ
ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು

ಓ ಚಿನ್ನ ಅಂದು ನೋಡಿದೆ ನಿನ್ನನು
ಓ ರನ್ನ ಸೆರೆ ಮಾಡಿದೆ ನನ್ನನು
ಅರಿಯದೆ ಹೇಗೊ ನಾ ಬೆರೆತೆ ನಿನ್ನಲಿ
ತನು ಮನವೆಲ್ಲ ತುಂಬಿ ನಿಂತೆ ನನ್ನಲಿ
ನಿನ್ನನೆ ಕಂಡೆ ಎಲ್ಲೆಲ್ಲು, ನನ್ನನ್ನೆ ಕಂಡೆ ನಿನ್ನಲ್ಲು
ನಿನ್ನನೆ ಕಂಡೆ ಎಲ್ಲೆಲ್ಲು, ನನ್ನನ್ನೆ ಕಂಡೆ ನಿನ್ನಲ್ಲು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು

ಯಾವುದೋ ಜನುಮಾಂತರ ಬಂಧನ,
ಬೆರೆಸಿತು ಅದು ನಮ್ಮನು ಆ ದಿನ
ಹೆಣ್ಣು: ತಾಳದು ಜೀವ ನೀ ನಿಮಿಷ ನೊಂದರು,
ಒಂದೆ ಒಂದು ಹನಿಯ ಕಣ್ಣೀರು ಬಂದರು,
ನಿನ್ನನು ಮರೆಯಲಾರೆನು ಅಗಲಿ ಬದುಕಲಾರೆನು
ನಿನ್ನನು ಮರೆಯಲಾರೆನು ಅಗಲಿ ಬದುಕಲಾರೆನು
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ

ಮುದ್ದಿನ ಹುಡುಗ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು

ಗಂಡು:ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ

ಕನಸಲ್ಲಿ ಬಂದವನಾರೇ..ಮನಸಲ್ಲಿ ನಿಂದವನಾರೇ Lyrics

ಶೃತಿ ಸೇರಿದಾಗ (1987) -

ಸಾಹಿತ್ಯ : ಚಿ.ಉದಯಶಂಕರ
ಸಂಗೀತ : ಟಿ.ಜಿ.ಲಿಂಗಪ್ಪ
ಗಾಯನ : ಎಸ್.ಜಾನಕಿ
ರಾಗ : ಮಧುಬಂತಿ

ಆ.......ಆ.......
ಕನಸಲ್ಲಿ ಬಂದವನಾರೇ..ಮನಸಲ್ಲಿ ನಿಂದವನಾರೇ
ಅವನಾರೋ ನಾ ಕಾಣೆ ನೀ ಹೇಳೆ ಗೆಳತಿ......{ಪಲ್ಲವಿ}

ಜಟೆಯಲ್ಲಿ ಗಂಗೆಯ ಧರಿಸಿರುವಾ
ಮುಡಿಯಲಿ ಚಂದ್ರನ ಮುಡಿದಿರುವಾ
ಶೂಲವು ಅವನಾ ಕರದಲ್ಲೀ..
ನಗುವಾ ಮೊಗವಾ ಕಂಡು ಸೋತೆ....{ಪಲ್ಲವಿ}

ಮಂಜಿನ ಗಿರಿಯಲಿ ಕಾಣಿಸಿದಾ
ಸೂರ್ಯನ ಕಾಂತಿಯ ನಾಚಿಸಿದಾ
ಪ್ರೇಮದಿ ನನ್ನಾ ಬಳಿ ಬಂದಾ
ಒಲಿದು ಬಂದೆ ಗಿರಿಜೆ ಎಂದ....{ಪಲ್ಲವಿ}

ವಂದನೆ ವಂದನೆ ಸಾವಿರ ವಂದನೆ Lyrics

ವಂದನೆ ವಂದನೆ
ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ
ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ || ೨

ನೀಲಾಂಬರದ ಬೆಳ್ದಿಂಗಳಲಿ
ತೇಲಾಡುತಿರೊ ಸೌಂದರ್ಯವು ನೀನೆ
ರಂಗೆರಿರುವ ಹೂದೋಟದಲಿ
ತೂಗಾಡುತಿರೊ ಮಂದಾರವು ನೀನೆ || ೨

ಮೋಹಾಂಗನೆ ನೀನು ಆ
ರಾಗಾಂಗ್ಕಿತ ನಾನು
ಓ ಶೋಭನೆ ನೀಲಾಂಜನೆ ಅಭಿವಂದನೆ

ವಂದನೆ ....

ಕಾರ್ತಿಕ ಸಿರಿ ದೇವಾಲಯದಿ
ಓಲಾಡುತಿರೊ ದೀಪಾಂಜಲಿಯು ನೀನೆ
ಬೃಂದಾವನದ ಕಾರಂಜಿಯಲಿ
ನಲಿದಾಡುತಿರೊ ನೃತ್ಯಾಂಗನೆಯು ನೀನೆ || ೨

ಸಿರಿ ಯೌವ್ವನೆ ನೀನು ಆ
ಅಭಿಮಾನಿಯು ನಾನು
ಓ ಶೋಭನೆ ಪ್ರೇಮಾಂಗನೆ ಅಭಿವಂದನೆ

ವಂದನೆ ....