ಚಿತ್ರ: ಕರುಳಿನ ಕರೆ (೧೯೭೦/1970)
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ಎಂ.ರಂಗ ರಾವ್
ಹಾಡಿದವರು: ಪಿ.ಬಿ.ಶ್ರೀನಿವಾಸ್
ಕಂಡೆ ನಾ ಕಂಡೆ
ಕಂಡೆ ನಾ ಕಂಡೆ
ಕಾಣದ ತಾಯಿಯ ನಾ ಕಂಡೆ
ತಾಯಿಯ ಪ್ರೀತಿಯ ಸವಿಯ ನಾ ಉಂಡೆ
ತಾಯಿ ನಗೆಯೆ ಜೋಗುಳ
ಅವಳ ನೋಟವೆ ಹೂಮಳೆ
ತಾಯಿ ನಗೆಯೆ ಜೋಗುಳ
ಅವಳ ನೋಟವೆ ಹೂಮಳೆ
ತಾಯಿ ಮಾತೆ ವೇದವು
ಅವಳೆ ಪ್ರೇಮ ಸ್ವರೂಪವು
ಕಂಡೆ ನಾ ಕಂಡೆ
ಕಾಣದ ತಾಯಿಯ ನಾ ಕಂಡೆ
ತಾಯಿಯ ಪ್ರೀತಿಯ ಸವಿಯ ನಾ ಉಂಡೆ
ಅರಿಯದ ಯಾವುದೊ ಸಂಬಂಧ
ಮೈಮರೆಸುವ ಮಮತೆಯ ಈ ಬಂಧ
ಅರಿಯದ ಯಾವುದೊ ಸಂಬಂಧ
ಮೈಮರೆಸುವ ಮಮತೆಯ ಈ ಬಂಧ
ಇದಾವ ಜನ್ಮದ ಋಣಾನುಬಂಧ
ಇದಾವ ಜನ್ಮದ ಋಣಾನುಬಂಧ
ಒಲವಿನ ಈ ಅನುಬಂಧ
ಕಂಡೆ ನಾ ಕಂಡೆ
ಕಾಣದ ತಾಯಿಯ ನಾ ಕಂಡೆ
ತಾಯಿಯ ಪ್ರೀತಿಯ ಸವಿಯ ನಾ ಉಂಡೆ
No comments:
Post a Comment