ಚಿತ್ರ: ತೀರದ ಬಯಕೆ (೧೯೮೧/1981)
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಹಾಡಿದವರು: ಪಿ.ಬಿ.ಶ್ರೀನಿವಾಸ್
ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ
ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ
ಆಸೆ ಉಯ್ಯಾಲೆ ಮೇಲೆ
ನಮ್ಮ ಅನುರಾಗ ಲೀಲೆ
ಹೆಹೆಹೆ ಹೆಹೆಹೆ
ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ
ನಯನವೊ ಮಿಂಚಿನ ಬಳೆ ಬಳೆ
ನಗುವೊ ರಾಗದ ಅಲೆ ಅಲೆ
ಒಡಲಲಿ ಶಿಲ್ಪಿಯ ಕಲೆ ಕಲೆ
ನುಡಿಯಿದು ಮೋಹದ ಬಲೆ ಬಲೆ
ಕುರುಳಿದು ಕಾರ್ಮುಗಿಲೊ
ಹೆರಳಿದು ನಾಗಗಳೊ
ಕುರುಳಿದು ಕಾರ್ಮುಗಿಲೊ
ಹೆರಳಿದು ನಾಗಗಳೊ
ಭೂಮಿಗಿಳಿದ ಅಪ್ಸರೆಯೊ
ನೀ ಭೂಮಿಗಿಳಿದ ಅಪ್ಸರೆಯೊ
ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ
ಅಶ್ರಯ ಬಯಸಿದೆ ಲತೆ ಲತೆ
ಪ್ರಕೃತಿ ಪುರುಷರ ಕಥೆ ಕಥೆ
ಮಳೆಯನು ಬಯಸಿದೆ ಧರೆ ಧರೆ
ಮೈತ್ರಿಯ ಬಯಸಿದೆ ಹರೆ ಹೊರೆ
ಯೌವನ ಸಂಭ್ರಮವೊ
ಮನಗಳ ಸಂಗಮವೊ
ಯೌವನ ಸಂಭ್ರಮವೊ
ಮನಗಳ ಸಂಗಮವೊ
ಒಡಲು ಬಯಸಿದೆ ಒಡನಾಡಿ
ಈ ಒಡಲು ಬಯಸಿದೆ ಒಡನಾಡಿ
ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ
ಆಸೆ ಉಯ್ಯಾಲೆ ಮೇಲೆ
ನಮ್ಮ ಅನುರಾಗ ಲೀಲೆ
No comments:
Post a Comment