Tuesday, January 10, 2017

ಪ್ರೇಮದ ಹೂಗಾರ ಈ ಹಾಡುಗಾರ Lyrics

ಚಿತ್ರ: ಚಿಕ್ಕೆಜಮಾನ್ರು
ವರ್ಷ: 1992
ಸಂಗೀತ ಮತ್ತು ಸಾಹಿತ್ಯ: ನಾದಬ್ರಹ್ಮ ಹಂಸಲೇಖ‌
ಗಾಯನ: ಡಾ|| ಎಸ್. ಪಿ. ಬಾಲಸುಬ್ರಹ್ಮಮಣ್ಯಂ

ಪ್ರೇಮದ ಹೂಗಾರ... ಪ್ರೇಮದ ಹೂಗಾರ...
ಈ ಹಾಡುಗಾರ
ಹೂ ನೀಡುತಾನೆ, ಮುಳ್ಳು ಬೇಡುತಾನೆ...
ಬೆಲ್ಲದ ಬಣಗಾರ, ಈ ಹಾಡುಗಾರ‌
ಸಿಹಿ ನೀಡುತಾನೆ, ಕಹಿ ಕೇಳುತಾನೆ...
ಮಣ್ಣಿನ ಮಮಕಾರ, ಕಂಪಿರುವ‌
ಮಾನದ ಮಣಿಹಾರ ಹೊಂದಿರುವ‌
ಈ ಭಾವ ಜೀವ...

ಗಂಧದ ಕೊರಡಾಗಿ, ಸ್ವಂತಕೆ ಬರಡಾಗಿ
ನೋವಿನಲು, ತೇಯುವುದು ಈ ಒಡಲು..
ಗಂಗೆಯು ತಾನಾಗಿ, ನೀರಿಗೆ ಎರವಾಗಿ
ಸೇರುತಿದೆ, ಕಂಬನಿಯ ಆ ಕಡಲು..
ಕರುಣೆಯ ಕುಂಬಾರ, ಈ ಹಾಡುಗಾರ‌
ಮಣ್ಣು ಬೇಡುತಾನೆ, ಕೊಡ ನೀಡುತಾನೆ..
ಮಮತೆಯ ಕಲೆಗಾರ, ಈ ಹಾಡುಗಾರ‌
ಮನೆ ಮಾಡುತಾನೆ, ಹೊರ ಹೋಗುತಾನೆ..
ಗೋವಿನ ಹಾಲಂಥ ಮನಸಿರುವ‌
ಕೂಸಿನ ಜೇನಂಥ ಮಾತಿರುವ‌
ಈ ಭಾವ ಜೀವ... || ಪ್ರೇಮದ ಹೂಗಾರ... ||

ನಿತ್ಯವು ತಾನುರಿದು, ಲೋಕಕೆ ದಿನಗರೆದು
ಎಚ್ಚರಿಸೊ ಸೂರ್ಯನಿಗೆ ನಿದ್ದೆಯಿಲ್ಲ..
ರಾತ್ರಿಗೆ ತಾನುಳಿದು, ತಾಪಕೆ ತಂಪೆರೆದು
ಸಂಚರಿಸೊ ಚಂದ್ರನಿಗೆ ಸೊಂತವಿಲ್ಲ..
ಊರಿನ ಗೆಣೆಕಾರ, ಈ ಹಾಡುಗಾರ‌
ಕಾಪಾಡುತಾನೆ, ಕಡೆಯಾಗುತಾನೆ..
ಸತ್ಯದ ಹರಿಕಾರ, ಈ ಹಾಡುಗಾರ‌
ಹೋರಾಡುತಾನೆ, ಒಂಟಿಯಾಗುತಾನೆ..
ಮಣ್ಣಿನ ಮಮಕಾರ, ಕಂಪಿರುವ‌
ಮಾನದ ಮಣಿಹಾರ ಹೊಂದಿರುವ‌
ಈ ಭಾವ ಜೀವ... || ಪ್ರೇಮದ ಹೂಗಾರ... ||

1 comment:

  1. ನಿತ್ಯವು ತಾನುರಿದು, ಲೋಕಕೆ ದಿನಗರೆದು
    ಎಚ್ಚರಿಸೊ ಸೂರ್ಯನಿಗೆ ನಿದ್ದೆಯಿಲ್ಲ..
    ರಾತ್ರಿಗೆ ತಾನುಳಿದು, ತಾಪಕೆ ತಂಪೆರೆದು
    ಸಂಚರಿಸೊ ಚಂದ್ರನಿಗೆ ಸೊಂತವಿಲ್ಲ..

    ReplyDelete