Saturday, January 14, 2017

ಬೆಳ್ಳೀ ಹಕ್ಕಿ ಆಗುವ ಬೆಳ್ಳೀ ಮೋಡಕೆ ಏರುವ Lyrics

ಚಿತ್ರ: ಎಮ್ಮೆ ತಮ್ಮಣ್ಣ (೧೯೬೬/1966)
ಸಾಹಿತ್ಯ: ಜಿ.ವಿ.ಅಯ್ಯರ್
ಸಂಗೀತ: ಟಿ.ಜಿ.ಲಿಂಗಪ್ಪ
ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ

ಬೆಳ್ಳೀ ಹಕ್ಕಿ ಆಗುವ
ಬೆಳ್ಳೀ ಮೋಡಕೆ ಏರುವ
ಬೆಳ್ಳೀ ಹಕ್ಕಿ ಆಗುವ
ಬೆಳ್ಳೀ ಮೋಡಕೆ ಏರುವ
ದೂರ ದೂರ ಸಾಗುವ
ನಾವೇ ನಾವೇ ಆಗುವ
ದೂರ ದೂರ ಸಾಗುವ
ನಾವೇ ನಾವೇ ಆಗುವ
ಹಾರುವ ತೇಲುವ ಆನಂದದೇ
ಬೆಳ್ಳೀ ಹಕ್ಕಿ ಆಗುವ
ಬೆಳ್ಳೀ ಮೋಡಕೆ ಏರುವ

ನೂರೊಂದು ದಾರಿ ನಮಗಾಗಿದೆ
ಬಾನಾಚೆ ಊರೆ ಬಳಿ ಬಂದಿದೆ
ನೂರೊಂದು ದಾರಿ ನಮಗಾಗಿದೆ
ಬಾನಾಚೆ ಊರೆ ಬಳಿ ಬಂದಿದೆ
ಏನೇ ಆದರೂ, ಎಲ್ಲೇ ಹೋದರೂ
ಏನೇ ಆದರೂ, ಎಲ್ಲೇ ಹೋದರೂ
ನಾನೇ ನೀನು ಎಂದಾಗಿದೆ

ಬೆಳ್ಳೀ ಹಕ್ಕಿ ಆಗುವ
ಬೆಳ್ಳೀ ಮೋಡಕೆ ಏರುವ

ಹೂ ಮೇಲೆ ದುಂಬಿ ಸುಖವಾಗಿದೆ
ಸಂತೋಷ ಗೀತೆ ಮೊದಲಾಗಿದೆ
ಹೂ ಮೇಲೆ ದುಂಬಿ ಸುಖವಾಗಿದೆ
ಸಂತೋಷ ಗೀತೆ ಮೊದಲಾಗಿದೆ
ಕಣ್ಣು ತುಂಬಿದೆ, ಮಾತು ಸೋತಿದೆ
ಇನ್ನೂ ಏಕೋ ನೀ ದೂರದೆ

ಬೆಳ್ಳೀ ಹಕ್ಕಿ ಆಗುವ
ಬೆಳ್ಳೀ ಮೋಡಕೆ ಏರುವ

No comments:

Post a Comment