Tuesday, January 10, 2017

ಹೆಣ್ಣೆಂದರೇನು ಸೌಂದರ್ಯವೇನು, ಕಣ್ಣಾರ ನಾ ಕಂಡೆನು Lyrics

ಚಿತ್ರ: ಸಾವಿರ ಸುಳ್ಳು (೧೯೮೫/1985)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಶಂಕರ್-ಗಣೇಶ್
ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ಹೆಣ್ಣೆಂದರೇನು ಸೌಂದರ್ಯವೇನು, ಕಣ್ಣಾರ ನಾ ಕಂಡೆನು
ಮೊಗವು ಎಂತಾ ಚೆನ್ನ, ನಗುವು ಎಂತಾ ಚೆನ್ನ
ನಯನ ಎಂತಾ ಚೆನ್ನ, ಅಧರ ಎಂತಾ ಚೆನ್ನ
ಇಂತ ಅಂದ ಇಂತ ಚೆಂದ ಎಲ್ಲೂ ಕಾಣೆ ನಾ
ಇಂತ ಅಂದ ಇಂತ ಚೆಂದ ಎಲ್ಲೂ ಕಾಣೆ ನಾ
ಹೆಣ್ಣೆಂದರೇನು ಸೌಂದರ್ಯವೇನು, ಕಣ್ಣಾರ ನಾ ಕಂಡೆನು
ಮೊಗವು ಎಂತಾ ಚೆನ್ನ, ನಗುವು ಎಂತಾ ಚೆನ್ನ
ನಯನ ಎಂತಾ ಚೆನ್ನ, ಅಧರ ಎಂತಾ ಚೆನ್ನ
ಇಂತ ಅಂದ ಇಂತ ಚೆಂದ ಎಲ್ಲೂ ಕಾಣೆ ನಾ
ಇಂತ ಅಂದ ಇಂತ ಚೆಂದ ಎಲ್ಲೂ ಕಾಣೆ ನಾ

ವಯ್ಯಾರಿ ನಿನ್ನ ಕಣ್ಣ ನೋಟಕೆ
ಬಂಗಾರಿ ನಿನ್ನ ಮೈಯ ಮಾಟಕೆ
ನನ್ನಾಣೆ ನಲ್ಲೆ ನಾ ಸೋತೆ ನಲ್ಲೆ
ನಿನ್ನಿಂದ ನಾನು ಹುಚ್ಚಾದೆ ನಲ್ಲೆ
ನಡೆದು ಬರಲು, ಬಳುಕಿ ನಡುವು
ಎದೆಯ ಕುಣಿಸಿ, ತರಲು ಚೆಲುವು
ಓ ಚೆಲುವೆ ಒಲವ ಬಯಸಿ ಬಯಸಿ ಬಯಕೆ ಅರಳಲು

ಹೆಣ್ಣೆಂದರೇನು ಸೌಂದರ್ಯವೇನು, ಕಣ್ಣಾರ ನಾ ಕಂಡೆನು
ಮೊಗವು ಎಂತಾ ಚೆನ್ನ, ನಗುವು ಎಂತಾ ಚೆನ್ನ
ನಯನ ಎಂತಾ ಚೆನ್ನ, ಅಧರ ಎಂತಾ ಚೆನ್ನ
ಇಂತ ಅಂದ ಇಂತ ಚೆಂದ ಎಲ್ಲೂ ಕಾಣೆ ನಾ
ಇಂತ ಅಂದ ಇಂತ ಚೆಂದ ಎಲ್ಲೂ ಕಾಣೆ ನಾ

ಬಾನಿಂದ ಜಾರಿ ಬಂದ ರಂಭೆಯೊ
ನಿನ್ನಾಸೆ ಕಂಡು ಇಲ್ಲಿ ನಿಂತೆಯೊ
ಇದೇನು ಮೌನ ಇದೇನು ದ್ಯಾನ
ಮುತ್ತಂತೆ ಒಂದು ಮಾತಾಡು ಚಿನ್ನ
ಕಣ್ಣೆ ಎಲ್ಲ, ನುಡಿಯುತಿರಲು
ಬೇರೆ ಚಪಲ, ಏಕೆ ಹೇಳು
ಓ ಕರುವಿ ನುಡಿಯೊ ಕೊಳಲ ದನಿಯ ಗೆಳತಿ ಅರಿಯೆನು

ಹೆಣ್ಣೆಂದರೇನು ಸೌಂದರ್ಯವೇನು, ಕಣ್ಣಾರ ನಾ ಕಂಡೆನು
ಮೊಗವು ಎಂತಾ ಚೆನ್ನ, ನಗುವು ಎಂತಾ ಚೆನ್ನ
ನಯನ ಎಂತಾ ಚೆನ್ನ, ಅಧರ ಎಂತಾ ಚೆನ್ನ
ಇಂತ ಅಂದ ಇಂತ ಚೆಂದ ಎಂದೂ ಕಾಣೆ ನಾ
ಇಂತ ಅಂದ ಇಂತ ಚೆಂದ ಎಲ್ಲೂ ಕಾಣೆ ನಾ

No comments:

Post a Comment