Saturday, January 14, 2017

ಒಂದೇ ಮಾತು ಒಂದೇ ಮನಸು Lyrics

ಚಿತ್ರ: ಕನ್ಯಾ ರತ್ನ (೧೯೬೩/1963)
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ಜಿ.ಕೆ.ವೆಂಕಟೇಶ್
ಹಾಡಿದವರು: ಎಸ್.ಜಾನಕಿ

ಒಂದೇ ಮಾತು ಒಂದೇ ಮನಸು
ಒಂದೇ ನೀತಿ ಬೇಕು
ನಮ್ಮ ನಾಡಿನ ಮಕ್ಕಳೆಲ್ಲರು
ಒಂದು ಗೂಡಬೇಕು
ಒಂದೇ ಮಾತು ಒಂದೇ ಮನಸು
ಒಂದೇ ನೀತಿ ಬೇಕು
ನಮ್ಮ ನಾಡಿನ ಮಕ್ಕಳೆಲ್ಲರು
ಒಂದು ಗೂಡಬೇಕು

ಜಾತಿ ಎರಡೇ ಎರಡು
ಗಂಡು ಹೆಣ್ಣು ಎಂದು
ಜಾತಿ ಎರಡೇ ಎರಡು
ಗಂಡು ಹೆಣ್ಣು ಎಂದು
ಜ್ಯೋತಿಯಂತೆ ನೀವು
ಬೆಳಗಬೇಕು ಇಂದು
ಎಲ್ಲರೆದೆಯ ನೀನು
ಗೆಲ್ಲಬೇಕು ಕಂದ
ಎಲ್ಲರೆದೆಯ ನೀನು
ಗೆಲ್ಲಬೇಕು ಕಂದ
ಎಲ್ಲಿರಲಿ ಎಂತಿರಲಿ
ತಾಯಿ ನಾಡೆ ಆನಂದ

ಒಂದೇ ಮಾತು ಒಂದೇ ಮನಸು
ಒಂದೇ ನೀತಿ ಬೇಕು
ನಮ್ಮ ನಾಡಿನ ಮಕ್ಕಳೆಲ್ಲರು
ಒಂದು ಗೂಡಬೇಕು

ಮಾತೇ ಮುತ್ತು ಜಾಣ
ಮಾತೇ ಕೇಡಿನ ತಾಣ
ಮಾತೇ ಮುತ್ತು ಜಾಣ
ಮಾತೇ ಕೇಡಿನ ತಾಣ
ಮಾತೆ ದೈವವನ್ನು
ಮರೆಯ ಬೇಡ ಚಿನ್ನ
ಏಳಿ ಏಳಿ ಏಳಿ
ನಾಡ ಕರೆಯ ಕೇಳಿ
ಏಳಿ ಏಳಿ ಏಳಿ
ನಾಡ ಕರೆಯ ಕೇಳಿ
ನಾಳೆಯೆಲ್ಲ ನಿಮದೆ
ವೀರರಾಗಿ ಬಾಳಿ

ಒಂದೇ ಮಾತು ಒಂದೇ ಮನಸು
ಒಂದೇ ನೀತಿ ಬೇಕು
ನಮ್ಮ ನಾಡಿನ ಮಕ್ಕಳೆಲ್ಲರು
ಒಂದು ಗೂಡಬೇಕು

No comments:

Post a Comment