Sunday, January 15, 2017

ಮೋಡದ ಒಳಗೆ ಹನಿಗಳ ಬಳಗ Lyrics

ಮೋಡದ ಒಳಗೆ ಹನಿಗಳ ಬಳಗ
ಒಂಟಿ ಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು |
ನನ್ನೊಳಗೊಳಗೆ ಒಲವಿನ ಯೋಗ
ತುದಿ ಗಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸುರಿ ಗೊತ್ತಿಲ್ಲ
ಹಾಡುಗಾರ ನಾನಲ್ಲ
ನಿನ್ನೆ ಪ್ರೀತಿ ಮಾಡುವೆ ನಾನು ಇಷ್ಟೇ ಅಂಬಲ |೨|

ನಿಂತಲಿ ನಾನಿಲಲಾರೆ
ಎಲ್ಲರು ಹೀಗಂತಾರೆ
ಏತಕೋ ನಾ ಕಾಣೆನು ಈ ತಳಮಳ
ಪ್ರೀತಿ ನನ್ನ ಬಲೆಯೊಳಗು
ನಾನೇ ಪ್ರೀತಿ ಬಲೆಯೊಳಗು
ಕಾಡಿದೆ ಕಂಗೆಡಿಸಿದೆ ಸವಿ ಕಳವಳ
ಖಾಲಿ ಜೆಬಿನಾ ಮಜುನು
ಪ್ರೀತಿ ಒಡೆಯನಾಗುವೆನು
ನಿನ್ನ ಬಿಟ್ಟು ಹೇಗಿರಬೇಕು ಹೇಳೇ ಪ್ರಾಣವೇ |೨| ||ಮೋಡದ ಒಳಗೆ ||

ನಾನು ನಿನ್ನ ಕಣ್ಣೊಳಗೆ
ಮಾಯ ಕನ್ನಡಿ ನೋಡಿರುವೆ
ನನ್ನನು ಬರಸೆಳೆಯುವ ಕಲೆ ನಿನ್ನದು
ಯಾವ ಜನುಮದ ಸಂಗಾತಿ
ಈಗಲೂ ಸಹ ಜೊತೆಗಾತಿ
ಅಧ್ಬುತ ಈ ಅತಿಶಯ ನಾ ತಾಳೆನು
ನಾನು ಬಡವ ಬದುಕಿನಲಿ
ಸಾಹುಕಾರ ಪ್ರೀತಿಯಲಿ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ |೨| ||ಮೋಡದ ಒಳಗೆ ||

No comments:

Post a Comment