Sunday, January 15, 2017

ನೆರಳನು ಕಾಣದ ಲತೆಯಂತೆ ಬಿಸಿಲಿಗೆ ಬಾಡಿದ ಹೂವಂತೆ Lyrics

ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ...
ಸೋತಿದೆ ಈ ಮೊಗವೇಕೆ,......??
ಏನು ನಿನ್ನ ಚಿಂತೇ..? ಹೇಳೇ ನನ್ನ ಕಾಂತೆ.. ಏನು ನಿನ್ನ ಚಿಂತೇ..? ಹೇಳೇ ನನ್ನ ಕಾಂತೆ...
ನೆರಳನು ಕಾಣದ ಲತೆಯಂತೆ ಬಿಸಿಲಿಗೆ ಬಾಡಿದ ಹೂವಂತೆ...
ಏನು ನಿನ್ನ ಚಿಂತೇ..? ಹೇಳೇ ನನ್ನ ಕಾಂತೆ... ಏನು ನಿನ್ನ ಚಿಂತೇ..? ಹೇಳೇ ನನ್ನ ಕಾಂತೆ...

ನಯನದಲಿ ಕಾಂತಿ ಇಲ್ಲಾ...
ತುಟಿಗಳಲಿ ನಗುವೇ ಇಲ್ಲಾ...
ಸವಿಯಾದ ಮಾತನು ಇಂದೇಕೋ ಕಾಣೆನು...
ನಿನ್ನ ಮನಸು ನಾನು ಬಲ್ಲೆ...
ನಿನ್ನ ವಿಷಯವೆಲ್ಲ ಬಲ್ಲೆ...
ನೀನೇನು ಹೇಳದೇ ನಾನೆಲ್ಲಾ ಹೇಳಲೇ...
ಏನಿಂತ ನಾಚಿಕೇ..? ಕಣ್ಣೀರು ಏತಕೇ..?

ನೆರಳನು ಕಾಣದ ಲತೆಯಂತೆ ಬಿಸಿಲಿಗೆ ಬಾಡಿದ ಹೂವಂತೆ..
ಏನು ನಿನ್ನ ಚಿಂತೇ..? ಹೇಳೇ ನನ್ನ ಕಾಂತೆ.. ಏನು ನಿನ್ನ ಚಿಂತೇ..?? ಹೇಳೇ ನನ್ನ ಕಾಂತೆ..

ಈ ಗುಡಿಯ ದೇವಿ ನೀನು..,
ಈ ತನುವಾ ಪ್ರಾಣ ನೀನು...
ಬಾಳಲ್ಲಿ ನೆಮ್ಮದಿ ನಿನ್ನಿಂದ ಕಂಡೆನು...
ನೀ ಅಳಲು ನೋಡಲಾರೆ.. ನೀ ಇರದೇ ಬಾಳಲಾರೆ...
ನನ್ನಲ್ಲಿ ಕೋಪವೇ..? ನಾ ನಿನಗೆ ಬೇಡವೇ..?
ನೀ ದೂರವಾದರೆ ನನಗಾರು ಆಸರೆ........??

ನೆರಳನು ಕಾಣದ ಲತೆಯಂತೆ ಬಿಸಿಲಿಗೆ ಬಾಡಿದ ಹೂವಂತೆ‌...
ಸೋತಿದೆ ಈ ಮೊಗವೇಕೆ,......?
ಏನು ನಿನ್ನ ಚಿಂತೇ..? ಹೇಳೇ ನನ್ನ ಕಾಂತೆ... ಏನು ನಿನ್ನ ಚಿಂತೇ..?? ಹೇಳೇ ನನ್ನ ಕಾಂತೆ..ಹ

ನೆರಳನು ಕಾಣದ ಲತೆಯಂತೆ ಬಿಸಿಲಿಗೆ ಬಾಡಿದ ಹೂವಂತೆ..
ಏನು ನಿನ್ನ ಚಿಂತೇ..? ಹೇಳೇ ನನ್ನ ಕಾಂತೆ.. ಏನು ನಿನ್ನ ಚಿಂತೇ..? ಹೇಳೇ ನನ್ನ ಕಾಂತೆ..

No comments:

Post a Comment