Tuesday, January 10, 2017

ಆಸೆಗಳೇ ಹಕ್ಕಿಗಳಾಗಿ ಕನಸುಗಳ ಆಗಸಕೇರಿ Lyrics

ಚಿತ್ರ: ಸಿಂಹ ಜೋಡಿ (೧೯೮೦/1980)
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ಸತ್ಯಂ
ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ಆಸೆಗಳೇ ಹಕ್ಕಿಗಳಾಗಿ
ಕನಸುಗಳ ಆಗಸಕೇರಿ
ಬೆಳ್ಳಿಮೋಡದಾಚೆಯಲಿ
ಸಂಜೆಗೆಂಪಿನ ರಂಗಿನಲಿ
ನೂತನ ಪ್ರೇಮ ಲೋಕದಲಿ
ಒಲವಿನ ಗೀತೆ ಹಾಡಿರಲಿ

ಆಸೆಗಳೇ ಹಕ್ಕಿಗಳಾಗಿ
ಕನಸುಗಳ ಆಗಸಕೇರಿ
ಬೆಳ್ಳಿಮೋಡದಾಚೆಯಲಿ
ಸಂಜೆಗೆಂಪಿನ ರಂಗಿನಲಿ
ನೂತನ ಪ್ರೇಮ ಲೋಕದಲಿ
ಒಲವಿನ ಗೀತೆ ಹಾಡಿರಲಿ

ಮಾಮರದ ಹೊಂದಳಿರೆ ಶುಭತೋರಣ
ಕೋಗಿಲೆಯ ಇನಿಸ್ವರವೆ ಆಮಂತ್ರಣ
ಹೊಂಬಾಳೆ ತೋಟದಲಿ ಮಧು ಮಂಟಪ
ಪ್ರೇಮಿಗಳ ಮಧುಮಿಲನ ರಸ ಮಂಟಪ
ಮನಸೊಂದಾದರೆ ಕನಸೊಂದಾದರೆ
ಸುಂದರ ಆ ಬದುಕು
ಮನಸೊಂದಾದರೆ ಕನಸೊಂದಾದರೆ
ಸುಂದರ ಆ ಬದುಕು
ರವಿ ನೀನಾದರೆ ಬುವಿ ನಾನಾದರೆ
ಬಾಳಿಗೆ ನೀ ಬೆಳಕು

ಆಸೆಗಳೇ ಹಕ್ಕಿಗಳಾಗಿ
ಕನಸುಗಳ ಆಗಸಕೇರಿ
ಬೆಳ್ಳಿಮೋಡದಾಚೆಯಲಿ
ಸಂಜೆಗೆಂಪಿನ ರಂಗಿನಲಿ
ನೂತನ ಪ್ರೇಮ ಲೋಕದಲಿ
ಒಲವಿನ ಗೀತೆ ಹಾಡಿರಲಿ

ಭೂದೇವಿ ಹಸಿರುಟ್ಟು ನಗೆ ಸೂಸಲು
ವಾಸಂತಿ ನಮಗೆಂದು ಹೂ ಚೆಲ್ಲಲು
ವನರಾಣಿ ಕೈ ಬೀಸಿ ಕರೆ ನೀಡಲು
ತಂಗಾಳಿ ಹಿತವಾಗಿ ತಾ ಬೀಸಲು
ಜಗವ ಮರೆತು ನಮ್ಮಲಿ ಬೆರೆತು
ಮೆರೆವ ಹಾಯಾಗಿ
ಜಗವ ಮರೆತು ನಮ್ಮಲಿ ಬೆರೆತು
ಮೆರೆವ ಹಾಯಾಗಿ
ಯುಗಯುಗವೆಲ್ಲ ಹೀಗೆ ಕಳೆವ
ಬಾಳಲಿ ಒಂದಾಗಿ

ಆಸೆಗಳೇ ಹಕ್ಕಿಗಳಾಗಿ
ಕನಸುಗಳ ಆಗಸಕೇರಿ
ಬೆಳ್ಳಿಮೋಡದಾಚೆಯಲಿ
ಸಂಜೆಗೆಂಪಿನ ರಂಗಿನಲಿ
ನೂತನ ಪ್ರೇಮ ಲೋಕದಲಿ
ಒಲವಿನ ಗೀತೆ ಹಾಡಿರಲಿ
ಆಸೆಗಳೇ ಹಕ್ಕಿಗಳಾಗಿ
ಕನಸುಗಳ ಆಗಸಕೇರಿ

No comments:

Post a Comment