ಚಿತ್ರ: ಲಾಲಿ (೧೯೯೭/1999)
ಸಾಹಿತ್ಯ: ಕೆ.ಕಲ್ಯಾಣ್
ಸಂಗೀತ: ವಿ.ಮನೋಹರ್
ಹಾಡಿದವರು: ರಾಜೇಶ್ ಕೃಷ್ಣನ್
ಚಂದನ ಕಂಪ ಲಾಲಿ ಲಾಲಿ
ಚಂದದ ಹೂವೆ ಲಾಲಿ ಲಾಲಿ
ನೀ ಕೇಳೊ ಅಮ್ಮ ನಾನೇನಮ್ಮ
ಈ ತೋಳೆ ನಿನ್ನ ತೂಗೋ ಜೋಲಿ
ಚಂದದ ನೂರು ಹೊಂಗನಸ
ಕಣ್ಣಲ್ಲಿ ತುಂಬಿ ಈ ದಿವಸ
ಲಾಲಿ ಹಾಡಿ ತೂಗುತೀನಿ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಚಂದನ ಕಂಪ ಲಾಲಿ ಲಾಲಿ
ಚಂದದ ಹೂವೆ ಲಾಲಿ ಲಾಲಿ
ನೀ ಕೇಳೊ ಅಮ್ಮ ನಾನೇನಮ್ಮ
ಈ ತೋಳೆ ನಿನ್ನ ತೂಗೋ ಜೋಲಿ
ತೊದಲಿನ ಸವಿ ಮಾತಿಗೆ ಲಾಲಿ ಲಾಲಿ
ಕಿಲಕಿಲ ನಗೆಯೂಟಕೆ ಲಾಲಿ ಲಾಲಿ
ಘಲ ಘಲ ಘಲ್ ನಾದಕೆ ಲಾಲಿ ಲಾಲಿ
ಮಡಿಲಿನ ಮಹರಾಣಿಗೆ ಲಾಲಿ ಲಾಲಿ
ಕರುಳ ಎಲ್ಲ ಹರಕೆಯು ಫಲವ ತೋರುವ ಲಾಲಿ ಲಾಲಿ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಚಂದನ ಕಂಪ ಲಾಲಿ ಲಾಲಿ
ಚಂದದ ಹೂವೆ ಲಾಲಿ ಲಾಲಿ
ನೀ ಕೇಳೊ ಅಮ್ಮ ನಾನೇನಮ್ಮ
ಈ ತೋಳೆ ನಿನ್ನ ತೂಗೋ ಜೋಲಿ
ಕನಸಿನ ಸಿರಿ ಕಾಣಲು ಲಾಲಿ ಲಾಲಿ
ಬೆಳಕಿನ ಗರಿ ಮೂಡಲು ಲಾಲಿ ಲಾಲಿ
ಒಲವಿನ ಒಡನಾಟಕೆ ಲಾಲಿ ಲಾಲಿ
ಮಾಯದ ವಾತ್ಸಲ್ಯಕೆ ಲಾಲಿ ಲಾಲಿ
ಜಗದ ಎಲ್ಲ ಹೃದಯವ ಸೆಳೆವ ಕೈಗೆ ಲಾಲಿ ಲಾಲಿ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
ಚಂದನ ಕಂಪ ಲಾಲಿ ಲಾಲಿ
ಚಂದದ ದೀಪ ಲಾಲಿ ಲಾಲಿ
ನೀ ಕೇಳೊ ಅಮ್ಮ ನಾನೇನಮ್ಮ
ಈ ತೋಳೆ ನಿನ್ನ ತೂಗೋ ಜೋಲಿ
ನಾಳೆಯ ಲೋಕ ನಿನ್ನದಮ್ಮ
ನೀ ಮೆಚ್ಚೋದೆಲ್ಲ ನಿನ್ನದಮ್ಮ
ಖಾಲಿಯಾಗದಿನ್ನು ಲಾಲಿ
ಜೋ ಜೋ ಜೋ ಜೋ
ಚಂದನ ಕಂಪ ಲಾಲಿ ಲಾಲಿ
ಚಂದದ ದೀಪ ಲಾಲಿ ಲಾಲಿ
No comments:
Post a Comment