Friday, January 13, 2017

ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ Lyrics

ಚಿತ್ರ: ದೇವರು ಕೊಟ್ಟ ತಂಗಿ (೧೯೭೩/1973)
ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ
ಸಂಗೀತ: ವಿಜಯಭಾಸ್ಕರ್
ಹಾಡಿದವರು: ಪಿ.ಬಿ.ಶ್ರೀನಿವಾಸ್

ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ
ನಾ ಕಾಣುತಿರುವ ನೋಟವೆಲ್ಲ ಸತ್ಯ ಸುಂದರ

ಹೂವಿನ ಗಿಡದಲಿ ಮುಳ್ಳನು ಬೆಸೆದೆ
ತಾವರೆ ಹೂವನು ಕೆಸರಲಿ ಎಸೆದೆ
ಒಲವಿನ ನನ್ನ ಸೋದರಿಯ
ಎಂದೆಂದಿಗು ಮರೆ ಮಾಡಿದೆಯ
ಎಂದೆಂದಿಗು ಮರೆ ಮಾಡಿದೆಯ

ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ
ನಾ ಕಾಣುತಿರುವ ನೋಟವೆಲ್ಲ ಸತ್ಯ ಸುಂದರ

ನೀಲಿಯ ಬಾನಲಿ ಕಪ್ಪನೆ ಮುಗಿಲು
ತಂಗಿಯ ಬಾಳಲಿ ಭೀಕರ ಸಿಡಿಲು
ಎದೆಯನು ಬಿರಿಯುವ ಮಾತಿನಲಿ
ವಿಷವನು ಕುಡಿಸಿದೆ ನನಗಿಲ್ಲಿ
ವಿಷವನು ಕುಡಿಸಿದೆ ನನಗಿಲ್ಲಿ

ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ
ನಾ ಕಾಣುತಿರುವ ನೋಟವೆಲ್ಲ ಘೋರ ಭೀಕರ
ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ
ನಾ ಕಾಣುತಿರುವ ನೋಟವೆಲ್ಲ ಘೋರ ಭೀಕರ

No comments:

Post a Comment