Saturday, January 14, 2017

ಪ್ರೀತಿಸಿ ನೋಡು ಪ್ರೇಮಿಸಿ ನೋಡು Lyrics

ಚಿತ್ರ: ಪ್ರೀತಿಸಿ ನೋಡು (೧೯೮೧/1981)
ಸಾಹಿತ್ಯ: ಗೀತಪ್ರಿಯ
ಸಂಗೀತ: ವಿಜಯಭಾಸ್ಕರ್
ಹಾಡಿದವರು: ಎಸ್.ಪಿ.ಬಿ.

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು
ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

ಪ್ರೀತಿಯೆ ದೇವನು ನೀಡಿದ ಕೊಡುಗೆ
ಪ್ರೀತಿಯೆ ಆಗಲಿ ಮನಸಿನ ಉಡುಗೆ
ಪ್ರೀತಿಯೆ ಒಂದು ಪಾವನ ಜ್ಯೋತಿ
ಪ್ರೀತಿಯೆ ಒಂದು ಪಾವನ ಜ್ಯೋತಿ
ಪ್ರೀತಿಯ ಬಾಳಿಗೆ ಪ್ರೀತಿಯೆ ನೀತಿ

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

ತಾಯಿಯ ಮಡಿಲಲೆ ಪ್ರೀತಿಯ ಬೆಸುಗೆ
ಹರೆಯದ ವಯಸಲಿ ಪ್ರೀತಿಯ ಒಸಗೆ
ಪ್ರೀತಿಯ ಭಾವದ ಆಳ ಅಪಾರ
ಪ್ರೀತಿಯ ಭಾವದ ಆಳ ಅಪಾರ
ಪ್ರೀತಿಯೆ ಬಾಳಿಗೆ ಅಮೃತ ಧಾರ

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

ಪ್ರೀತಿಯ ಲೋಕಕೆ ಆಸೆಯ ಹೊನಲು
ಪ್ರೀತಿಯು ಇದ್ದರೆ ದಿನ ಹೊಸ ಹಗಲು
ಮನಸಿನ ಭಾವಕೆ ಪ್ರೀತಿಯ ಚಿಲುಮೆ
ಮನಸಿನ ಭಾವಕೆ ಪ್ರೀತಿಯ ಚಿಲುಮೆ
ಸನಿಹಕೆ ತರುವುದೆ ಪ್ರೀತಿಯ ಹಿರಿಮೆ

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

No comments:

Post a Comment