Friday, January 13, 2017

ನಡೆ ನಡೆ ನಡೆ ನಡೆ ನಡೆ ಮನವೆ Lyrics

ಚಿತ್ರ: ಹೃದಯ ಸಂಗಮ (೧೯೭೨/1972)
ಸಾಹಿತ್ಯ: ಗೀತಪ್ರಿಯ
ಸಂಗೀತ: ವಿಜಯಭಾಸ್ಕರ್
ಹಾಡಿದವರು: ಪಿ.ಬಿ.ಶ್ರೀನಿವಾಸ್

ನಡೆ ನಡೆ ನಡೆ ನಡೆ ನಡೆ ಮನವೆ
ನವ ಜೀವನದಾ ಕಡೆಗೆ
ನಮ್ಮಯ ಜೊತೆಯಲಿ ನಡೆ ಜಗವೆ
ನವ ಸಾಧನೆಯಾ ಕಡೆಗೆ
ನಡೆ ನಡೆ ನಡೆ ನಡೆ ನಡೆ ಮನವೆ
ನವ ಜೀವನದ ಕಡೆಗೆ

ಆ ದಿನ ಕಂಡೆ, ಬೇರೆ ಪ್ರಪಂಚ
ಆ ದಿನ ಕಂಡೆ ಬೇರೆ ಪ್ರಪಂಚ
ಈ ದಿನ ಪ್ರೇಮ ಪ್ರಪಂಚ
ಎಲ್ಲರು ಜೊತೆಯಲಿ ಬಾಳುತಲಿದ್ದರೆ
ಮುಳ್ಳೂ ಹೂವಿನ ಮಂಚ
ಆಹಾ, ಮುಳ್ಳೂ ಹೂವಿನ ಮಂಚ

ನಡೆ ನಡೆ ನಡೆ ನಡೆ ನಡೆ ಮನವೆ
ನವ ಜೀವನದಾ ಕಡೆಗೆ

ಜೀವನವನ್ನೇ, ಹುಡುಕುತ ಅಂದು
ಜೀವನವನ್ನೇ ಹುಡುಕುತ ಅಂದು
ದೂರ ದೂರಕೆ ನಡೆದೆ
ಅದುವೆ ನನ್ನನು ಹುಡುಕಲು ಇಂದು
ನಿಜ ಜೀವನ ನಾ ಪಡೆದೆ
ಒಹೊ, ನಿಜ ಜೀವನ ನಾ ಪಡೆದೆ

ನಡೆ ನಡೆ ನಡೆ ನಡೆ ನಡೆ ಮನವೆ
ನವ ಜೀವನದಾ ಕಡೆಗೆ

ಸುಖವೇನಿದ್ದರು, ಪಂಜರದಲ್ಲಿ
ಸುಖವೇನಿದ್ದರು ಪಂಜರದಲ್ಲಿ
ಅಲ್ಲಿನ ಬಾಳು ಬಾಳಲ್ಲ
ಕನಸಿನ ಲೋಕವ ನನಸಲಿ ಕಂಡರೆ
ಆಗಲೆ ಸುಂದರ ಜಗವೆಲ್ಲ
ಒಹೊ, ಆಗಲೆ ಸುಂದರ ಜಗವೆಲ್ಲ

ನಡೆ ನಡೆ ನಡೆ ನಡೆ ನಡೆ ಮನವೆ
ನವ ಜೀವನದಾ ಕಡೆಗೆ

No comments:

Post a Comment