Tuesday, January 10, 2017

ರಾಮ ರಾಮ ರಾಮ, ಹಸಿರು ಗಿಣಿಯ ರಾಮ Lyrics

ಚಿತ್ರ: ಚಿಕ್ಕೆಜಮಾನ್ರು (೧೯೯೨/1992)
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ರಾಮ ರಾಮ ರಾಮ, ಹಸಿರು ಗಿಣಿಯ ರಾಮ
ರಾಮ ರಾಮ ರಾಮ, ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂದಿ, ಹೋ ಓ ಓ ಹಾಡಿನಲ್ಲಿ ನಾನು ಬಂದಿ

ಮಾತಿನಲ್ಲಿ ನೀನು ಬಂದಿ, ಹೋ ಓ ಓ ಪ್ರೀತಿಯಲ್ಲಿ ನಾನು ಬಂದಿ

ಮಳೆ ನೀರು ಭೂಮಿಗಿಳಿದಂತೆ ಮನದೊಳಗೆ ಜಾರಿದ
ಗಿಳಿಯೆ ನೀ ಹೇಳು ಅವನ್ಯಾರು
ಪಿಳಪಿಳನೆ ನಗುವ ಕಣ್ಣೊಳಗೆ ಗಿಳಿಶಾಸ್ತ್ರ ಹೇಳಿದ
ಗಿಳಿಯ ಹೋಲೋಳು ಅವಳ್ಯಾರು
ನನಗವನು ಒಲಿವನೊ ತಿಳಿದಿಲ್ಲ
ಅವನವಿನ ಪರರನು ಬಯಸಲ್ಲ
ಅವಳಕಡೆ ಸೆಳೆಯುವ ಈ ಎದೆಯ
ಬಯಕೆಗಳ ಅವಳಿಗೆ ತಿಳಿಸುವೆಯ
ಸೊಸೆಯಾದರೆ ಅವನ ಮಹಲಿಗೆ, ಮಡದಿ ಅವನೆದೆಗೆ

ರಾಮ ರಾಮ ರಾಮ, ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂದಿ, ಹೋ ಓ ಓ ಹಾಡಿನಲ್ಲಿ ನಾನು ಬಂದಿ
ಮಾತಿನಲ್ಲಿ ನೀನು ಬಂದಿ, ಹೋ ಓ ಓ ಪ್ರೀತಿಯಲ್ಲಿ ನಾನು ಬಂದಿ

ನನಗೇನೊ ಅವಳು ಹಿಡಿಸಿದಳು ಮಲೆನಾಡ ಚಂದನ
ಗಿಳಿಯ ಮಾತಾಡೊ ಬಿಳಿ ಹಂಸ
ನಮ್ಮೂರಿನಲ್ಲಿ ಕಡಲಿಲ್ಲ ಕಡಲಂತೆ ಈ ದೊರೆ
ನನಗೆ ತುಂಬಾನೆ ಹಿಡಿಸಿದರು
ಅವಳ ಮನದೊಳಗಡೆ ಏನಿದೆಯೊ
ಅವಳ ಮನ ಯಾರಿಗೆ ಕಾದಿದೆಯೊ
ಅವರ ಎದೆಯೊಳಗಡೆ ಏನಿದೆಯೊ
ಅವರ ಮನೆ ಯಾರಿಗೆ ತೆರೆದಿದೆಯೊ
ಜೊತೆಯಾದರೆ ಅವಳ ಸೊಗಸಿಗೆ, ತಾಳಿ ಕೊರಳೊಳಗೆ

ರಾಮ ರಾಮ ರಾಮ, ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂದಿ, ಹೋ ಓ ಓ ಹಾಡಿನಲ್ಲಿ ನಾನು ಬಂದಿ
ಮಾತಿನಲ್ಲಿ ನೀನು ಬಂದಿ, ಹೋ ಓ ಓ ಪ್ರೀತಿಯಲ್ಲಿ ನಾನು ಬಂದಿ
ರಾಮ ರಾಮ ರಾಮ, ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂದಿ, ಹೋ ಓ ಓ ಹಾಡಿನಲ್ಲಿ ನಾನು ಬಂದಿ
ಮಾತಿನಲ್ಲಿ ನೀನು ಬಂದಿ, ಹೋ ಓ ಓ ಪ್ರೀತಿಯಲ್ಲಿ ನಾನು ಬಂದಿ

No comments:

Post a Comment