ಚಿತ್ರ: ಕಾಂಚನ ಮೃಗ (೧೯೮೧/1981)
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ಅಶ್ವಥ್-ವೈದಿ
ಹಾಡಿದವರು: ಎಸ್.ಪಿ.ಬಿ
ಹೂ ಬನದಲೀ
ನಗುವು ಸುಮದಲೀ
ಪ್ರೀತೀ ಹಾಡಲೀ
ತಾನ ಮೂಡಲೀ
ಹೂ ಬನದಲೀ
ನಗುವು ಸುಮದಲೀ
ಪ್ರೀತೀ ಹಾಡಲೀ
ತಾನ ಮೂಡಲೀ
ಶೃಂಗಾರ ಕಾವ್ಯ ಭಾವ
ಮೈತಾಳಿ ಬಂದಿತೋ
ಸಂಗೀತ ರಾಗ ಲಾಸ್ಯ
ಈ ಜೀವ ತುಂಬಿತೋ
ಶೃಂಗಾರ ಕಾವ್ಯ ಭಾವ
ಮೈತಾಳಿ ಬಂದಿತೋ
ಸಂಗೀತ ರಾಗ ಲಾಸ್ಯ
ಈ ಜೀವ ತುಂಬಿತೋ
ಮಧು ಋತುವು ನಗು ನಗುತ
ಲಾವಣ್ಯ ತಂದಿತೋ
ಈ ಚೆಲುವ ಈ ಒಲವ
ಕವಿ ಹಾಡು ಕಂಡಿತೋ
ಹೂ ಬನದಲೀ
ನಗುವು ಸುಮದಲೀ
ಪ್ರೀತೀ ಹಾಡಲೀ
ತಾನ ಮೂಡಲೀ
ಹೂ ಮಂಚದಲ್ಲಿ ಅಂದ
ಆನಂದ ತೂಗಿತೋ
ರೋಮಾಂಚದಲ್ಲಿ ಕಾಲ
ಇಲ್ಲೇನೆ ನಿಂತಿತೋ
ಹೂ ಮಂಚದಲ್ಲಿ ಅಂದ
ಆನಂದ ತೂಗಿತೋ
ರೋಮಾಂಚದಲ್ಲಿ ಕಾಲ
ಇಲ್ಲೇನೆ ನಿಂತಿತೋ
ಮಧುಲತೆಯು ವಧುವಾಗಿ
ಸೌಂದರ್ಯ ಹೊಮ್ಮಿತೋ
ಮಧಿರೆಯದು ನಯನದಲಿ
ರತಿಯಂತೆ ಬಂದಿತೋ
ಹೂ ಬನದಲೀ
ನಗುವು ಸುಮದಲೀ
ಪ್ರೀತೀ ಹಾಡಲೀ
ತಾನ ಮೂಡಲೀ
No comments:
Post a Comment